ತಿಮ್ಮ ಗುರುವಿನ ಸರ್ವಕಾಲೀಕ ಸತ್ಯ:
ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ!
ಚಿನ್ನದಾತುರಕಿಂತ ಹೆಣ್ಣುಗಂಡೊಲವು!
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ!
ತಿನ್ನುವುದಾತ್ಮವನೆ – ಮಂಕುತಿಮ್ಮ!
ಮನೆಯೊಳೋ ಮಠದೊಳೋ ಸಭೆಯೊಳೋ ಸಂತೆಯೊಳೋ!
ಕೊನೆಗೆ ಕಾಡೊಳೋ ಮಸಾಣದೊಳೋ ಮತ್ತೆಲ್ಲೋ!!
ಗಣನೆಗೇರಲಿಕೆಂದು ಜನ ತಪಿಸಿ ತೊಳಲುವುದು!
ನೆನೆಯದಾತ್ಮದ ಸುಖವ – ಮಂಕುತಿಮ್ಮ!!
~