Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

ಖಾಲಿತನದ ಪೂರ್ಣತೆ

October 18, 2026

ಬೇಕೆಂಬ ಹಂಬಲ ಕರಗಿದಾಗ,
ಬದುಕಿನ ನಿಜಾರ್ಥ ಅರಳುವುದಂತೆ;
ಹಿಡಿದ ಕೈಗಳು ದೂರವಾದರೂ,
ಹೃದಯದ ಪ್ರೀತಿ ಉಳಿಯುವುದಂತೆ.
ಯಾರಿಗೂ ಬೇಕೆಂದು ಬದುಕದಿರೆ,
ಎಲ್ಲರಿಗೂ ದಾರಿಯಾಗ ಹಂಬಲಿಸದಿರೆ;
ದಾರಿಯಲಿ ಬೆಳಕಾಗಲು ಕಲಿತರೆ,
ನಿನ್ನೊಳಗಿನ ನಿನ್ನನು ಕಾಣಬಹುದೇನೋ,
ಖಾಲಿತನವೂ ಪೂರ್ಣತೆಯಾಗಬಹುದೇನೋ!

~ಮಾಹೆ

Posted in: @kannada, Jatakaa Tagged: Jataka, kannada, lifepath, poetry

ಸಂಕಲ್ಪ

October 17, 2026

ಸಂಕಲ್ಪಕೆ ಬೇಕು ವಿವೇಕದ ಬೆಳಕು,
ಪ್ರಾರ್ಥನೆಗೆ ಬೇಕು ಹೃದಯದ ಮಿಡಿತ;
ಜಪದ ಎಣಿಕೆಯಲ್ಲ ಸಾಧನೆಯ ಹಿರಿಮೆ,
ಅಹಂಕಾರ ಕರಗುವುದೇ ಅದರ ಮಹಿಮೆ;
ದೃಢ ಸಂಕಲ್ಪಕೆ ಆರ್ದ್ರ ಪ್ರಾರ್ಥನೆ ಸೇರಿದಾಗ,
ಸರಳ ಪೂಜೆಯೂ ಆತ್ಮೋನ್ನತಿಯ ದಾರಿಯಾಗದೆ.

~ಮಾಹೆ

Posted in: @kannada, Jatakaa Tagged: Jataka, kannada, lifepath, poetry

ಕಾಲಜ್ಞಾನ

October 16, 2026

ನಿನ್ನೆಯ ನೆನಪು ಬದುಕಿನ ಪಾಠ,
ನಾಳೆಯ ಕನಸು ಪಯಣದ ನೋಟ;
ಇಂದಿನ ಕ್ಷಣವ ಹಿಡಿದಿಡುವೆನೆಂಬ ಭ್ರಮೆ,
ಕಾಲವ ಕಟ್ಟಿಹಾಕುವ ಮನದ ವ್ಯಾಮೋಹವೇ!
ನಿನ್ನೆಯಿಂದ ಕಲಿತು, ನಾಳೆಗೆ ದಾರಿ ಕಾಣು,
ಇಂದಿನ ಬದುಕಲಿ ಮೂರನ್ನೂ ಒಂದಾಗಿಸು.

~ಮಾಹೆ

Posted in: @kannada, Jatakaa Tagged: Jataka, kannada, lifepath, poetry
1 2 … 190 Next »

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com

Hebbar's blog

Scribbles in this journey of life

Skip to content ↓