Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

@kannada

ಕನ್ನಡದ ಬರವಣಿಗೆ!

ಆತ್ಮಧ್ಯಾನ

October 27, 2026

ಬೆಳಕಿನ ಹುಡುಕಾಟ, ನಾದದ ಬೆನ್ನಾಟ,
ಮನದ ಕಲ್ಪನೆಗಳಲಿ ಎಂತಹ ಅಲೆದಾಟ!
ಕಾಣುವ ದೃಶ್ಯಗಳೆಲ್ಲ ಬಂದು ಹೋಗುವವು,
ಕಾಣುವವನ ಸತ್ಯವ ಮರೆಮಾಚುವವು;
ಅಲೆದಾಡುವ ಮನವು ಅವನಲಿ ನೆಲೆಸಿದಾಗ,
ಹುಡುಕುವವ ಕರಗಿ, ಸತ್ಯವೇ ಉಳಿವುದಂತೆ.

~ಮಾಹೆ

Posted in: @kannada, Jatakaa Tagged: Jataka, kannada, lifepath, poetry

ಶರಣಾಗತಿ

October 26, 2026

ಅವನ ಪ್ರೀತಿಸುವುದೇ ಭಕ್ತಿ,
ಅವನ ಪ್ರೀತಿಗೆ ಪಾತ್ರವಾಗುವುದೇ ಮುಕ್ತಿ;
ತಾಯಿಯ ಮಡಿಲಲಿ ಮಗುವಿಗೆ ಮುಚ್ಚುಮರೆಯೇಕೆ?
ಅವನ ಸನ್ನಿಧಿಯಲಿ ಅಹಂಕಾರದ ಹೊದಿಕೆಯೇಕೆ?
ಕೆರೆಯ ನೀರನು ಕೆರೆಗೆ ಅರ್ಪಿಸಿದಂತೆ,
ನನ್ನನು ಅವನಿಗೆ ಅರ್ಪಿಸುವುದೇ ಶರಣಾಗತಿಯಲ್ಲವೇ?

~ಮಾಹೆ

Posted in: @kannada, Jatakaa Tagged: Jataka, kannada, lifepath, poetry

ಸರ್ವಾತ್ಮಭಾವ

October 25, 2026

ನಿನ್ನೊಳಗಿನ ಬೆಳಕೇ ನನ್ನೊಳಗೂ ಇದೆ,
ನಿನ್ನ ನೋವಿನ ನೆರಳು ನನ್ನೊಳಗೂ ಇದೆ;
ನಿನ್ನನು ನೋಯಿಸಿದರೆ ನನ್ನ ಮನವೇ ನೊಂದೀತು,
ನಿನ್ನನು ಪ್ರೀತಿಸಿದರೆ ನನ್ನ ಹೃದಯವೇ ಅರಳೀತು;
ಪರರೊಳಗೆ ತನ್ನನು ಕಾಣುವುದೇ ಆತ್ಮಗೌರವ,
ಎಲ್ಲರನು ತನ್ನಂತೆ ಪ್ರೀತಿಸುವುದೇ ಸರ್ವಾತ್ಮಭಾವ.

~ಮಾಹೆ

Posted in: @kannada, Jatakaa Tagged: Jataka, kannada, life, love, poetry
1 2 … 24 Next »

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com