ಕಣ್ಣ ಮುಚ್ಚಿ ಕೈಯ ಮುಗಿದು ನಿಂತ ಅಮ್ಮನ ಕಂಡು ನಾನು ಸೆರಗ ಹಿಡಿದು ಬಗ್ಗಿ ನೋಡಿದೆ ತಿಂಡಿ ಬಟ್ಟಲ ನಡುವೆ ಪುಟ್ಟ ಹೊಳಪ ಕಂಡಿಹೆ ಅದೇನು ನಡೆದಿಹುದೊ ನಾನಂತೂ ಅರಿಯೆ ಎರಡು ದಿನದಿಂದ ಮನೆ ತುಂಬಿದ ಸಂಭ್ರಮ ಮಿಣಮಿಣ ರಂಗಿನ ರಾಶಿಯದು ಎಲ್ಲೆಡೆ ಅದು ಮುಟ್ಟದಿರು ಇದನು ಎಳೆಯದಿರು ಎಂಬ ತಾಕೀತುಗಳ ನಡುವೆ ನಮ್ಮ ಸಂಭ್ರಮ ಎಲ್ಲರ ಮುಖದಲದುವೆ ನಗೆಯ ಹೊನಲು ಸಡಗರದ ಓಟದೊಡನೆ ಗಮಗಮ ಪರಿಮಳ ಅಜ್ಜಿಯ ಕಿವಿಯಲಿ ಕೇಳಿದೆ ಇದೇನಿದು ವಿಶೇಷ ನಸುನಗೆಯ ಮುದದಲೆಂದಳು ಅವ ಬರುವನೆಂದು ಒಂದು ಗಳಿಗೆಯ ಅವನ ಬರುವಿಗೆ ಇದಷ್ಟಾದರೆ ನಮ್ಮೊಡನೆ ಅವನ ಸೇರಿಸಿಡಲು ಸಂತಸಕಾವ ಬರ ನಗುತಾ ಚಿವುಟಿದಳು ಕಣ್ಬಿಟ್ಟು ಕನಸಕಾಣೆಂದು ಮರೆತೆನೇಕೋ ಈ ಮುತ್ತನು ಹಲವು ದಶಕ