Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

poetry

Jataka Bandi

ಬೇರು

October 6, 2026

ಜಪ ಧ್ಯಾನಗಳು ಅರಳಿದ ಹೂವಿನಂತೆ,
ಸತ್ಯ ಧರ್ಮಗಳು ಕಾಣದ ಬೇರಿನಂತೆ;
ಹೂವಿನ ಚೆಲುವು ಕಣ್ಣಿಗೆ ಕಾಣುವುದು,
ಬೇರಿನ ಬಲವು ಬಿರುಗಾಳಿಗಷ್ಟೇ ತಿಳಿವುದು;
ಬಿರುಗಾಳಿಯಲಿ ಸಾಧನೆಯ ಅಳತೆ ತಿಳಿವುದು,
ಧರ್ಮದ ಬೇರು ಗಟ್ಟಿಯಿದ್ದರೆ ಬದುಕು ನಲುಗದು.

~ಮಾಹೆ

Posted in: @kannada, Jatakaa Tagged: Jataka, kannada, lifepath, poetry

ಸುಜ್ಞಾನ

October 4, 2026

ಕೇಳಿದ ಪಾಠವೆಲ್ಲ ಜ್ಞಾನವಾಗುವುದಿಲ್ಲ,
ಮನನ ಮಾಡದೆ ಸತ್ಯ ಮನದಾಳಕ್ಕಿಳಿಯುವುದಿಲ್ಲ;
ಸತ್ಸಂಗ ದಾರಿ ತೋರಬಹುದು,
ಸಾಧನೆ ನಮ್ಮನ್ನು ನಡೆಸಬೇಕು;
ಸುಜ್ಞಾನ ಇನ್ನಷ್ಟು ತಿಳಿಯುವುದಲ್ಲ,
ತಪ್ಪಾಗಿ ತಿಳಿದದ್ದು ಕರಗಿ, ಸತ್ಯ ತಿಳಿಯುವುದಷ್ಟೇ.

~ಮಾಹೆ

Posted in: @kannada, Jatakaa Tagged: Jataka, kannada, lifepath, poetry

ಅನುಭವ

October 3, 2026

ಕಷ್ಟ ಸುಖಗಳ ಉಳಿಯಲಿ ಬದುಕು ಕೆತ್ತಿತು,
ಅಹಂಕಾರದ ಚೂರುಗಳ ಮೆಲ್ಲಗೆ ಕಳೆಯಿತು;
ಅನುಭವದ ಕೈಯಲಿ ಶಿಲೆ ವಿಗ್ರಹವಾಯಿತು,
ಆತ್ಮಾನುಭವದಲಿ ಅದಕೆ ಜೀವಕಳೆ ತುಂಬಿತು;
ಜೀವನಾನುಭವ ಕೆತ್ತಿದ ವಿಗ್ರಹ,
ಆತ್ಮಾನುಭವ ತುಂಬಿದ ದೈವತ್ವ.

~ಮಾಹೆ

Posted in: @kannada, Jatakaa Tagged: Jataka, kannada, lifepath, poetry
1 2 … 83 Next »

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com