ಕರ್ಮಯೋಗಿಗಳಾಗುವುದು ಹೇಗೆ?

ಕರ್ಮಯೋಗವೆಂದರೆ ಫಲಾಪೇಕ್ಶೆಯಿಲ್ಲದೆ ಕರ್ಮವನ್ನ್ಯು ಮಾಡುವುದಂತೆ. ಸ್ವಂತ ಇಚ್ಚೆಯಿಂದಲೋ ಅನಿವಾರ್ಯದಿಂದಲೋ ಪ್ರಾರಂಭಿಸಿದ ಕಾರ್ಯವನ್ನು ಅತ್ಯಂತ ಶ್ರದ್ಡೆಯಿಂದ ತಮ್ಮ ಉಸಿರಿಗಿಂತಲೂ ಹೆಚ್ಚಿನದಾಗಿಸಿಕೊಂಡವರನ್ನು ಏನೆಂದು ಗುರ್ತಿಸುವುದು? ಸಾಧಕರೇ, ಸಂತರೇ ಅಥವಾ ಕರ್ಮಯೋಗಿಗಳೇ? ನಾನರಿಯೆ.

ಈದಿನ ೫ ಮಂದಿ ಮಹಾಸಾದಕರ ದರ್ಶನ, ವಿಚಾರಧಾರೆ, ವಿಭಿನ್ನವಾದ ನಂಬಲಸದಳವಾದ ಸರಳಿಕೆಯ ಜೀವನ ಶ್ಯೆಲಿ ಮತ್ತದರ ಗುರುತರ ಸಾಮಾಜಿಕ ಪರಿಣಾಮಗಳ ಪರಿಚಯವಾಯಿತು. ಹತ್ತು ಹಲವು ಉತ್ಸಾಹಿ ಧುರೀಣರು ಸೇರಿ ಪ್ರಾರಂಬಿಸಿರುವ ಕುವೆಂಪು ವೇದಿಕೆ ಟ್ರಸ್ಟ್, ದೊಡ್ಡಬಳ್ಳಾಪುರ ಇಂದು ಅದರ ಪ್ರಥಮ ಸಭೆಯೊಂದಿಗೆ ಹೊಂದಿಸಿದ ವಿನೂತನ ಸತ್ಕಾರ ಸಮಾರಂಭ ನಿಜಕ್ಕೂ ಅತ್ಯುನ್ನತ.

ಇಂದು ಸನ್ಮಾನಿತರಾದವರು – ಒಬ್ಬರು ಕನ್ನಡ ಪಂಡಿತರು, ಪದವೀಧರ ನೂತನ ವಿಚಾರವಾದಿ ಪ್ರಯೋಗಶೀಲ ಕ್ರುಷಿಕ, ದಿಟ್ತ್ಟ ಸಮಾಜ ಸೇವಕಿ, ರಂಗಭೂಮಿಯ ಮೂಲಕ ರೈತ ಯುವಕರಲ್ಲಿ ನವಚೇತನ ತುಂಬುತ್ತಿರುವ ನಾಟಕಗಾರ, ಅಳಿದುಳಿದ ಭೂಮಿಯನ್ನು ಬಳಸಿಕೊಂಡು ಮಾದರಿ ಜೀವನ ನಡೆಸಿ ಸಂಪೂರ್ಣ ಧನ್ಯತೆ ಪಡೆದಿರುವ ರೈತ ಮಹಿಳೆ!

ಇವರ ಹುರುಪು ಅವರ ವಯಸ್ಸಿನ ಹಿಂದಿರುವ ಹಲವು ದಶಕಗಳ ಒಂದಿನಿತು ಛಾಯೆಯನ್ನೂ ತೋರ್ಗೊಡದೆ ಹಸಿರಿನ ಬಲವನ್ನು ಎತ್ತಿ ಬಿತ್ತರಿಸುತ್ತಿತ್ತು. ಇವರಂತಹ ಅದೆಷ್ಟು ಕರ್ಮಯೋಗಿಗಳ ಫಲದಿಂದ ಈ ನಾಡು ಬೆಳೆಯುತ್ತಿದೆಯೋ! ಸುಂದರ ಹಾಗು ಸರಳವಾದ ಅನುಭವದ ನುಡಿಗಳು ಅತ್ಯಮೂಲ್ಯವಾದ ಗ್ರಂಥಗಳ ಸಾರಾಂಶದಂತಿದ್ದುವು. ಈ ಮಾದರಿ ಸಮಾರಂಭ ನಡೆಸಿದ ಸಂಸ್ಥೆಗಳು ಶಾಶ್ವತವಾಗಿ ಸಫಲವಾಗಬೇಕು.

ಇಂತಹುದೊಂದು ಕಾರ್ಯಕ್ರಮ ಪ್ರತಿಯೊಂದು ಕಡೆಯೂ ನಡೆಯಬೇಕು. ಹೆಚ್ಚಾಗಿ ಮಕ್ಕಳಮುಂದೆ ಶಾಲೆಗಳಲ್ಲಿ ನಡೆದರೆ, ಇನ್ನಷ್ಟು ಯೋಗಿಗಳ ಉದಯವಾಗಬಹುದೇನೋ!

100_1350 100_1352

100_1357 100_1361

100_1363