Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ

jatakaa

ಸಡಗರ

February 22, 2024
ಕಣ್ಣ ಮುಚ್ಚಿ ಕೈಯ ಮುಗಿದು ನಿಂತ ಅಮ್ಮನ
ಕಂಡು ನಾನು ಸೆರಗ ಹಿಡಿದು ಬಗ್ಗಿ ನೋಡಿದೆ
ತಿಂಡಿ ಬಟ್ಟಲ ನಡುವೆ ಪುಟ್ಟ ಹೊಳಪ ಕಂಡಿಹೆ
ಅದೇನು ನಡೆದಿಹುದೊ ನಾನಂತೂ ಅರಿಯೆ

ಎರಡು ದಿನದಿಂದ ಮನೆ ತುಂಬಿದ ಸಂಭ್ರಮ
ಮಿಣಮಿಣ ರಂಗಿನ ರಾಶಿಯದು ಎಲ್ಲೆಡೆ
ಅದು ಮುಟ್ಟದಿರು ಇದನು ಎಳೆಯದಿರು
ಎಂಬ ತಾಕೀತುಗಳ ನಡುವೆ ನಮ್ಮ ಸಂಭ್ರಮ

ಎಲ್ಲರ ಮುಖದಲದುವೆ ನಗೆಯ ಹೊನಲು
ಸಡಗರದ ಓಟದೊಡನೆ ಗಮಗಮ ಪರಿಮಳ
ಅಜ್ಜಿಯ ಕಿವಿಯಲಿ ಕೇಳಿದೆ ಇದೇನಿದು ವಿಶೇಷ 
ನಸುನಗೆಯ ಮುದದಲೆಂದಳು ಅವ ಬರುವನೆಂದು

ಒಂದು ಗಳಿಗೆಯ ಅವನ ಬರುವಿಗೆ ಇದಷ್ಟಾದರೆ
ನಮ್ಮೊಡನೆ ಅವನ ಸೇರಿಸಿಡಲು ಸಂತಸಕಾವ ಬರ
ನಗುತಾ ಚಿವುಟಿದಳು ಕಣ್ಬಿಟ್ಟು ಕನಸಕಾಣೆಂದು
ಮರೆತೆನೇಕೋ ಈ ಮುತ್ತನು ಹಲವು ದಶಕ
2
Posted in: Jatakaa Tagged: jatakaa, kannada, pause, poetry
« Previous 1 … 6 7

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2025 Hebbar's blog.

Me WordPress Theme by themehall.com