Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

lifepath

ಶರಣಾಗತಿ

October 26, 2026

ಅವನ ಪ್ರೀತಿಸುವುದೇ ಭಕ್ತಿ,
ಅವನ ಪ್ರೀತಿಗೆ ಪಾತ್ರವಾಗುವುದೇ ಮುಕ್ತಿ;
ತಾಯಿಯ ಮಡಿಲಲಿ ಮಗುವಿಗೆ ಮುಚ್ಚುಮರೆಯೇಕೆ?
ಅವನ ಸನ್ನಿಧಿಯಲಿ ಅಹಂಕಾರದ ಹೊದಿಕೆಯೇಕೆ?
ಕೆರೆಯ ನೀರನು ಕೆರೆಗೆ ಅರ್ಪಿಸಿದಂತೆ,
ನನ್ನನು ಅವನಿಗೆ ಅರ್ಪಿಸುವುದೇ ಶರಣಾಗತಿಯಲ್ಲವೇ?

~ಮಾಹೆ

Posted in: @kannada, Jatakaa Tagged: Jataka, kannada, lifepath, poetry

ಸಾಕ್ಷಿ

October 24, 2026

ಪ್ರಶ್ನೆಯ ಅಲೆಯಲಿ ಉತ್ತರದ ಹುಡುಕಾಟ,
ಉತ್ತರದ ಬೆನ್ನಲ್ಲೇ ಮತ್ತೊಂದು ಅಲೆಯಾಟ;
ಅಲೆಗಳ ಎಣಿಕೆಯಲಿ ಸಾಗರವ ಮರೆಯದಿರು,
ಮನದ ಗೊಂದಲದಲಿ ನಿನ್ನನ್ನೇ ಕಳೆಯದಿರು;
ಸಾಕ್ಷೀಭಾವದಲಿ ನಿತ್ಯಸತ್ಯವ ಕಂಡಾಗ,
ಅಲೆಗಳು ಕರಗಿದರೂ ಸಾಗರವು ಉಳಿಯದಿರದೇ?

~ಮಾಹೆ

Posted in: @kannada, Jatakaa Tagged: Jataka, kannada, life, lifepath, poetry

ಒಳಹರಿವು

October 23, 2026

ಆಲೋಚನೆ ಮನದಲಿ ಹರಿವ ನದಿ,
ವಿಚಾರವೇ ಅದಕೆ ದಿಕ್ಕು ತೋರುವ ಬುದ್ಧಿ;
ಬುದ್ಧಿಯ ಅಣೆಕಟ್ಟು ಹರಿವನು ತಿರುಗಿಸಿತು,
ಸಂಸ್ಕಾರದ ಕಾಣದ ಸೆಳೆತ ಅದನೂ ನಡೆಸಿತು;
ಹರಿವ ನದಿಯ ಬದಲಿಸುವ ಮುನ್ನ,
ಅದರ ಮೂಲವ ಅರಿವುದೇ ಸಾಧನೆಯೆ?

~ಮಾಹೆ

Posted in: @kannada, Jatakaa Tagged: Jataka, kannada, lifepath, love, poetry
1 2 … 52 Next »

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com