ಶಾಂತಿ September 13, 2026 ಹಣವಿರದೆ ಕೊಳ್ಳಲಾರೆವು ಲೋಕದ ವಸ್ತು,ಶಾಂತಿಯಿರದೆ ಸವಿಯಲಾರೆವು ಬದುಕಿನ ಸೊಗಸು;ನಡೆನುಡಿಯೇ ಜಪವಾಗಲಿ, ಬದುಕೇ ಧ್ಯಾನವಾಗಲಿ,ಮನದಂಗಳವ ಗುಡಿಸಿ ಕೃಪೆಗೆ ಜಾಗವಾಗಲಿ;ನಮ್ಮ ಕೈಲಾದುದ ಮಾಡಿ, ಕೈಮುಗಿದ ಕ್ಷಣದಲಿ,ಶರಣಾದ ಮನದೊಳಗೆ ಶಾಂತಿ ತಾನೇ ನೆಲೆಸಲಿ. ~ಮಾಹೆ
ಕರ್ತವ್ಯ September 11, 2026 ಈ ಪದಕದಾವ ಮೋಡಿಯೋ,ತ್ಯಾಗದ ಕೋಡಿಗೆ ಕಟ್ಟಿದ ಸೇತುವೆಯೋ; ಬಯಕೆಯ ಬಲೆಯನು ತುಂಡರಿಸಿ,ವಿವೇಕದ ಹರಿತವನು ಧಿಕ್ಕರಿಸಿ,ಕಣ್ತೆರೆದು ನಡೆದರೂಅಂಧಪ್ರಜ್ಞೆಯ ನೆರಳಲಿ; ಪ್ರೀತಿ ಪ್ರೇಮವ ಬುಟ್ಟಿಯಲಿರಿಸಿ,ದಾನವ ಪ್ರಕೃತಿಯನುಅದೇಕೆ ಮರೆಸುವುದೋಈ ಕರ್ತವ್ಯ? ~ ಮಾಹೆ
ಚಿಂತನೆ September 9, 2026 ಸತ್ಯವ ಹುಡುಕುವ ತನಕ ಶಾಸ್ತ್ರದ ದಾರಿ,ಸತ್ಯವ ಕಂಡ ಮೇಲೆ ಮೌನದ ಸವಾರಿ;ಮಿಥ್ಯೆಯ ನೆರಳನು ಬದಿಗಿರಿಸಿ,ಆತ್ಮದ ಬೆಳಕಲಿ ಮನವಿರಿಸಿ;ಚಿಂತನೆಯೇ ಕರಗಿದ ನಿಶ್ಚಿಂತ ನೆಲೆ,ಅದೇ ಆತ್ಮಾನುಸಂಧಾನದ ಸತ್ಯದ ಸೆಲೆ. ~ಮಾಹೆ