Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

ಪುಟ್ಟ ಹಕ್ಕಿ

April 12, 2026

ಪುಟ್ಟ ಹಕ್ಕಿಗದೆಂತು ಗೊತ್ತು
ಟೊಂಗೆಯದು ಮರದ ಕಿವಿಗಳೆಂದು
ಅವಳ ಕಂಠಸಿರಿಗೆ ಸೋತ ಮಾತೆಯವಳು
ಎಲೆಗಳಾಡಿಸಿಹಳು ಮೆಚ್ಚುಗೆ ಸೂಸುತ ನಿಂದು

ಪುಟ್ಟ ಹಕ್ಕಿಗದೆಂತು ಗೊತ್ತು
ಅಲ್ಲೆ ಕುಳಿತಿಹ ಗಿಡುಗನ ಗೂಡದೆಂದು
ಅವಳ ಕಂಠಸಿರಿಗೆ ಕಾದು ಕುಳಿತ ಮಾತೆಯವಳು
ಹಾಡದು ಅವಳ ಕಂದಮ್ಮಗಳ ಲಾಲಿಯದೆಂದು

ಪುಟ್ಟ ಹಕ್ಕಿಗದೆಂತು ಗೊತ್ತು
ತುಂಟ ಬೆಕ್ಕಿನ ಮನೆಯ ಹಿತ್ತಲದೆಂದು
ಅವಳ ಕಂಠಸಿರಿಗೆ ಹೊಂಚುಹಾಕಿಹ ಮಾತೆಯವಳು
ಆಟಕೊ ಊಟಕೋ ಹಿಡಿಯ ಹಂಬಲಿಸಿಹಳೆಂದು

ಪುಟ್ಟ ಹಕ್ಕಿಗದೆಂತು ಗೊತ್ತು
ಮನೆಯೊಡತಿಯ ಕೋಣೆಯ ಕಿಟಕಿಯದೆಂದು
ಕಂಠಸಿರಿಗೆ ಸ್ವರವ ಸೇರಿಸಿ ನಲಿಯ ಬಯಸಿಹಳೆಂದು
ನಿನದಷ್ಟೆ ಅಲ್ಲವೋ ನೀನಿರುವ ಜಗವಿದೆಂದೂ


Discover more from Hebbar's blog

Subscribe to get the latest posts sent to your email.

1
Posted in: Jatakaa Tagged: life, lifepath, love, poetry
← When Silence Finds You First
The Long Nights After Twenty Eight →

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com