Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

lifepath

ಕನಸು

September 22, 2026

ಕಣ್ಣು ಮುಚ್ಚಿದ ಕನಸು ನಿದ್ರೆಯಲಿ,
ಕಣ್ಣು ತೆರೆದ ಕನಸು ಬದುಕಿನಲಿ;
ಕುಳಿತು ಮೌನವಾದುದೇ ಧ್ಯಾನವಲ್ಲ,
ಕನಸು ಕರಗಿದುದೇ ಜಾಗೃತಿಯಲ್ಲವೇ?
‘ನಾನು’ ಎಂಬ ನಿದ್ದೆಯಿಂದ ಎಚ್ಚರವಾದ ಕ್ಷಣ,
ಅಸತ್ತಿನ ಇರುಳು ಸರಿದು, ಸತ್ತಿನ ಬೆಳಗು.

~ಮಾಹೆ

Posted in: @kannada, Jatakaa Tagged: Jataka, kannada, lifepath, poetry

ನಿತ್ಯಕರ್ಮ

September 21, 2026

ಕಷ್ಟ ಬಾರದಿರುವುದೇ ಕೃಪೆಯಲ್ಲ,
ಕಷ್ಟದಲಿ ದಾರಿ ತಪ್ಪದಿರುವುದೇ ಕೃಪೆ;
ಕೃಷ್ಣನಿದ್ದರೂ ವನವಾಸ ತಪ್ಪಲಿಲ್ಲ,
ಆದರೂ ಧರ್ಮದ ಹೆಜ್ಜೆ ಜಾರಲಿಲ್ಲ;
ಸತ್ಕರ್ಮ ಬದುಕಿನ ಹಾದಿಯ ಸುಗಮಗೊಳಿಸಲಿ,
ಸುಜ್ಞಾನ ಒಳದೀಪವಾಗಿ ಮುಕ್ತಿಗೆ ನಡೆಸಲಿ;
ಇದೇ ನಿತ್ಯಕರ್ಮದ ಒಳಾರ್ಥವಾಗಲಿ,
ಇದೇ ನಿತ್ಯ ಪ್ರಾರ್ಥನೆಯ ಸಾರವಾಗಲಿ.

~ಮಾಹೆ

Posted in: @kannada, Jatakaa Tagged: Jataka, kannada, lifepath, poetry

ಅವನು

September 20, 2026

ಗಣಿಯೊಳಗೆ ಚಿನ್ನವಿದೆ, ಮಣ್ಣೂ ಇದೆ,
ಮನದೊಳಗೆ ದೇವರಿದ್ದಾನೆ, ಮಲಿನವೂ ಇದೆ;
ಅಗೆದಷ್ಟು ಸಾಧನೆ, ಕುದಿದಷ್ಟು ವಿವೇಕ,
ಕರಗಿದಷ್ಟು ‘ನಾನು’, ಹೊಳೆದಷ್ಟು ಬೆಳಕು;
“ಅವನು ನನ್ನೊಳಗಿದ್ದಾನೆ” ಎನ್ನುವುದು ಅರಿವಲ್ಲ,
ಮಣ್ಣು ಕರಗಿ ಚಿನ್ನವಾದಾಗ, ಉಳಿಯುವುದೇ ಅವನಲ್ಲವೇ?

~ಮಾಹೆ

Posted in: @kannada, Jatakaa Tagged: Jataka, kannada, lifepath
« Previous 1 … 4 5 6 … 46 Next »

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com