Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

lifepath

ಪ್ರೀತಿ

September 19, 2026

ಹುಟ್ಟಿದ್ದೆಲ್ಲವೂ ಸಾಯುವುದಂತೆ ಜಗದಲಿ,
ನೀರು, ಗಾಳಿ, ಬೆಳಕು ಹುಟ್ಟಿದ್ದ ಕಂಡವರಾರು?

ಅದು ಸತ್ಯವಾದರೆ,
ಪ್ರೀತಿ ಹುಟ್ಟಿತೆನ್ನುವವರಾರು?
ಹುಟ್ಟೇ ಇಲ್ಲದ ಪ್ರೀತಿಗೆ
ಕೊನೆಯಾದರೂ ಎಲ್ಲಿಹುದು ಜಗದಲಿ?

~ ಮಾಹೆ

Posted in: @kannada, Jatakaa Tagged: Jataka, kannada, lifepath, poetry

ಸ್ವಾಧ್ಯಾಯ

September 19, 2026

ಗ್ರಂಥಗಳು ತೋರಬಹುದು ಬೆಳಕಿನ ದಾರಿ,
ನಡೆದ ಹೆಜ್ಜೆಯೇ ನಮ್ಮ ಸ್ವಂತ ಸವಾರಿ;
ಪ್ರತಿದಿನದ ಬದುಕೇ ಒಂದೊಂದು ಪುಟ,
ತಪ್ಪು ಒಪ್ಪುಗಳೇ ಮೌನದ ಪಾಠ;
ತನ್ನನ್ನೇ ಓದಲು ಕಲಿತ ದಿನದಿಂದ,
ಬದುಕೇ ಗ್ರಂಥ, ಅನುಭವವೇ ಗುರು.

~ಮಾಹೆ

Posted in: @kannada, Jatakaa Tagged: Jataka, kannada, lifepath, poetry

ಸಾಧನೆ

September 18, 2026

ಏಕಾಂತದ ಮೌನದಲಿ ಶಾಂತವೆನಿಸಿದ ಮನ,
ಲೋಕದ ಗದ್ದಲದಲಿ ಉಳಿದರೆ ಅಪ್ಪಟ ಚಿನ್ನ;
ನಿಂದೆ ಬಂದರೂ, ನಷ್ಟ ಕಾಡಿದರೂ,
ನಮ್ಮವರೇ ಮನದಂತೆ ನಡೆಯದಿದ್ದರೂ;
ಅಲುಗದ ಅರಿವೇ ಸಾಧನೆಯ ನಿಜ ಫಲ,
ಪ್ರಪಂಚವೇ ಪರೀಕ್ಷೆ, ಪ್ರತಿಕ್ರಿಯೆಯೇ ಸ್ವಾನುಭವ.

~ಮಾಹೆ

Posted in: @kannada, Jatakaa Tagged: Jataka, kannada, lifepath, poetry
« Previous 1 … 5 6 7 … 46 Next »

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com