ಸ್ವತಂತ್ರವೆನ್ನುವ ಮನಕೆ ಪರರ ಹಂಗೇಕೆ?
ಪ್ರೀತಿಯ ಬಯಸುವ ಮನಕೆ ಹೊಗಳಿಕೆಯೇಕೆ?
ಪ್ರೀತಿಯ ಬೇಡುವುದ ಬಿಟ್ಟು ಹಂಚಲು ಕಲಿ,
ಕರುಣೆಯ ಕಾಯುವುದ ಬಿಟ್ಟು ತೋರಲು ಕಲಿ;
ಸಾಗರವ ಸೇರಿದ ನದಿಗೆ ಬೇರೆ ಹೆಸರೇಕೆ?
ಆತ್ಮದಲಿ ನೆಲೆತ ಮನಕೆ ಬಂಧನವಾದರೂ ಏಕೆ?
~ಮಾಹೆ
Discover more from Hebbar's blog
Subscribe to get the latest posts sent to your email.
