ಬೆಳಕಿನ ಹುಡುಕಾಟ, ನಾದದ ಬೆನ್ನಾಟ,
ಮನದ ಕಲ್ಪನೆಗಳಲಿ ಎಂತಹ ಅಲೆದಾಟ!
ಕಾಣುವ ದೃಶ್ಯಗಳೆಲ್ಲ ಬಂದು ಹೋಗುವವು,
ಕಾಣುವವನ ಸತ್ಯವ ಮರೆಮಾಚುವವು;
ಅಲೆದಾಡುವ ಮನವು ಅವನಲಿ ನೆಲೆಸಿದಾಗ,
ಹುಡುಕುವವ ಕರಗಿ, ಸತ್ಯವೇ ಉಳಿವುದಂತೆ.
~ಮಾಹೆ
Discover more from Hebbar's blog
Subscribe to get the latest posts sent to your email.
