ಅಹಂಕಾರ November 15, 2026 ನನ್ನಿಷ್ಟವೇ ನಡೆಯಲೆಂಬ ಅಹಂಕಾರದ ಬೀಜ,ಎಲ್ಲರೂ ನನ್ನಂತೆ ನಡೆಯಲೆಂಬ ಅದರ ವೃಕ್ಷ;ನನ್ನ ಮಾತು ಕೇಳಿರೆಂಬ ಆಗ್ರಹವೇಕೆ?ಪರರ ಮಾತು ಕೇಳಲಾರದ ಹಟವೇಕೆ?ಸ್ವೇಚ್ಛೆಗೆ ನೀರೆರೆದರೆ ಅಹಂಕಾರದ ಮರ,ತಾಳ್ಮೆಗೆ ನೀರೆರೆದರೆ ನಿರಹಂಕಾರದ ಚಿಗುರು! ~ಮಾಹೆ
ದೇಹಧರ್ಮ November 14, 2026 ಆರೋಗ್ಯವಿರುವಾಗ ದೇಹವನು ಕಾಪಾಡು,ಇಚ್ಛೆ ಕ್ರಿಯೆಗಳ ಬಲದಿಂದ ಸಾಧನೆಯ ಮಾಡು;ಅಶಕ್ತತೆ ಬಂದಾಗ ಪ್ರಕೃತಿಯ ಧರ್ಮವ ತಿಳಿ,ವಿವೇಕ ವೈರಾಗ್ಯದ ಬೆಳಕಲಿ ಬದುಕನು ಕಲಿ;ದೇಹವನು ಕಡೆಗಣಿಸಿದರೆ ಸಾಧನೆಯೆಲ್ಲಿ?ದೇಹವೇ ನಾನೆಂದು ಹಿಡಿದರೆ ಮುಕ್ತಿಯೆಲ್ಲಿ? ~ಮಾಹೆ
ಕಾಲದಾಟ November 13, 2026 ಸುಖದಲಿ ಯುಗವೂ ಕ್ಷಣವಾಗಿ ಕಳೆಯುವುದು,ದುಃಖದಲಿ ಕ್ಷಣವೂ ಯುಗವಾಗಿ ಕಾಡುವುದು;ಕಾಲವನು ಬದಲಿಸುವುದು ಮನದ ಮಾಯೆ,ಕಾಲದೊಡನೆ ಬದಲಾಗುವುದು ಬದುಕಿನ ಛಾಯೆ;ಕಷ್ಟಕೆ ಬೇಸತ್ತು ತೊರೆದರೆ ವೈರಾಗ್ಯವೇ?ಸುಖದುಃಖಗಳ ಸಾಕ್ಷಿಯಾದರೆ ಮುಕ್ತಿಯಲ್ಲವೇ? ~ಮಾಹೆ