ಬೆಳಗಿಂದ ರಾತ್ರಿವರೆಗೂ ನಾನೆಂಬ ಆಟ,
ಜನ್ಮಜನ್ಮಗಳಿಂದಲೂ ಅದೇ ಹಳೆಯ ಪಾಠ;
ಕೈಯಲಿ ಕರ್ತವ್ಯ, ಮನದಲಿ ಸಾಕ್ಷಿಭಾವ,
ನಾನೆಂಬ ಹಟ ಕರಗಿದರೆ ಆತ್ಮದ ಅನುಭಾವ;
ಹೊರಗಿನ ವೈರಿಯ ಗೆದ್ದವನು ಶೂರ,
ಒಳಗಿನ ನಾನೆಂಬುದ ಮೀರಿದವನೇ ಧೀರ!
~ಮಾಹೆ
Discover more from Hebbar's blog
Subscribe to get the latest posts sent to your email.
