ಬದುಕು September 14, 2026 ಕಷ್ಟ ಬಂದಾಗ ನೆನೆದರೆ, ದೇವರು ಔಷಧಿಯಂತೆ,ಹೊತ್ತು ನೋಡಿ ನೆನೆದರೆ, ಭಕ್ತಿ ಆಹಾರದಂತೆ;ನಡೆದರೂ, ನುಡಿದರೂ, ನಕ್ಕರೂ, ಅತ್ತರೂ,ಅವನ ನೆನಪೇ ಉಸಿರಾದರೆ ಬದುಕಿನುದ್ದಕ್ಕೂ;ಉಸಿರಿಗೆ ಹೊತ್ತುಂಟೇ? ಸ್ಮರಣೆಗೆ ಬಿಡುವೆಲ್ಲಿ?ಅವನ ನೆನೆಯುತ್ತಲೇ ಬದುಕು, ಬದುಕುತ್ತಲೇ ಅವನಲ್ಲಿ. ~ಮಾಹೆ
ಶಾಂತಿ September 13, 2026 ಹಣವಿರದೆ ಕೊಳ್ಳಲಾರೆವು ಲೋಕದ ವಸ್ತು,ಶಾಂತಿಯಿರದೆ ಸವಿಯಲಾರೆವು ಬದುಕಿನ ಸೊಗಸು;ನಡೆನುಡಿಯೇ ಜಪವಾಗಲಿ, ಬದುಕೇ ಧ್ಯಾನವಾಗಲಿ,ಮನದಂಗಳವ ಗುಡಿಸಿ ಕೃಪೆಗೆ ಜಾಗವಾಗಲಿ;ನಮ್ಮ ಕೈಲಾದುದ ಮಾಡಿ, ಕೈಮುಗಿದ ಕ್ಷಣದಲಿ,ಶರಣಾದ ಮನದೊಳಗೆ ಶಾಂತಿ ತಾನೇ ನೆಲೆಸಲಿ. ~ಮಾಹೆ
ವಿವೇಕ September 12, 2026 ಹಣತೆ ಸಿದ್ಧ, ಎಣ್ಣೆಯಿದೆ, ಬತ್ತಿಯೂ ಕಾದಿದೆ,ಬೆಳಕಿಗಾಗಿ ಕತ್ತಲು ಇನ್ನೆಲ್ಲಿಗೆ ಓಡಿದೆ?ಮನವ ತೊಳೆದು, ವಿವೇಕದ ಬತ್ತಿಯ ನೆಟ್ಟರೆ,ಮೌನದ ಕಿಡಿಯಲಿ ‘ನಾನು’ ಕರಗಿದರೆ,ಹುಡುಕಿದ ಮೋಕ್ಷವು ಎದುರಲ್ಲಿ ಸಿಗುವುದಿಲ್ಲ,ಹುಡುಕುವವನೇ ಬೆಳಕೆಂದು ತಿಳಿದಾಗ, ದಾರಿಯೇ ಇಲ್ಲ. ~ ಮಾಹೆ