ಮರಳಿನ ಕಣವ ಹಿಡಿದು ಸಾಗರವ ಮರೆತೆವು,
ಅರಿತ ಅಲ್ಪವನ್ನೇ ಅಪಾರವೆಂದು ಬಗೆದೆವು;
ತಿಳಿದುದರ ಹೆಮ್ಮೆಯಲಿ ತಿಳಿಯದಿರಲು ಕಲಿತೆವು,
ಜ್ಞಾನದ ಬೆಳಕಿನಲ್ಲೇ ಅಜ್ಞಾನದಲಿ ಮುಳುಗಿದೆವು;
ತಿಳಿದದ್ದು ಕಣವೆಂದು ತಲೆಬಾಗಿದ ಕ್ಷಣ,
ಅರಿಯದ ಅನಂತವೇ ತೋರದೆ ತನ್ನ ದರ್ಶನ.
~ಮಾಹೆ
Discover more from Hebbar's blog
Subscribe to get the latest posts sent to your email.
