ಹಸಿವನು ಗೆಲ್ಲಲು ಉಪವಾಸ ಮಾಡಿದ,
ನಿದ್ದೆಯ ಮೀರಲು ಜಾಗರಣೆ ಹಿಡಿದ;
ಹತ್ತಿಕ್ಕಿದಷ್ಟೂ ಮೋಹವು ಬೆಳೆಯಿತು,
ಮನದೊಳಗೇ ಮತ್ತೊಂದು ಕದನವು ನಡೆಯಿತು;
ರಸವನು ಅರಿತಾಗ ಸೆಳೆತವು ಕರಗಿತು,
ಗೆಲ್ಲದೆಯೇ ಗೆದ್ದಾಗ ವೈರಾಗ್ಯ ಅರಳಿತು!
~ಮಾಹೆ
Discover more from Hebbar's blog
Subscribe to get the latest posts sent to your email.
