Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

ಕರ್ತವ್ಯ

September 11, 2026

ಈ ಪದಕದಾವ ಮೋಡಿಯೋ,
ತ್ಯಾಗದ ಕೋಡಿಗೆ ಕಟ್ಟಿದ ಸೇತುವೆಯೋ;

ಬಯಕೆಯ ಬಲೆಯನು ತುಂಡರಿಸಿ,
ವಿವೇಕದ ಹರಿತವನು ಧಿಕ್ಕರಿಸಿ,
ಕಣ್ತೆರೆದು ನಡೆದರೂ
ಅಂಧಪ್ರಜ್ಞೆಯ ನೆರಳಲಿ;

ಪ್ರೀತಿ ಪ್ರೇಮವ ಬುಟ್ಟಿಯಲಿರಿಸಿ,
ದಾನವ ಪ್ರಕೃತಿಯನು
ಅದೇಕೆ ಮರೆಸುವುದೋ
ಈ ಕರ್ತವ್ಯ?

~ ಮಾಹೆ


Discover more from Hebbar's blog

Subscribe to get the latest posts sent to your email.

Posted in: @kannada, Jatakaa Tagged: kannada, lifepath, love, poetry
← ಆಕಾಶ
ವಿವೇಕ →

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com