ಬದಲಾಗದ ಸತ್ಯವ ಅರಿಯುವುದು ಸರಳ,
ಬದಲಾಗುವ ಮಾಯೆಯ ಅರಿವು ವಿರಳ;
ಆದರೂ ಮಾಯೆಯ ಹಿಂದೆ ಮನ ಓಡಿತು,
ನಿತ್ಯದ ಸತ್ಯವನ್ನೇ ಕಠಿಣವೆಂದಿತು;
ಸತ್ಯಕ್ಕೆ ತೆರೆಯಿಲ್ಲ, ದೂರವೂ ಇಲ್ಲ,
ನೋಡುವ ಮನವೇ ನಿಶ್ಚಲವಾಗಿಲ್ಲ.
~ಮಾಹೆ
Discover more from Hebbar's blog
Subscribe to get the latest posts sent to your email.
