ಸಾರ್ಥಕತೆಯ ಹುಡುಕಾಟದಲಿ ದಶಕಗಳ ಕಳೆಯದಿರು,
ನಾಳಿನ ಅರ್ಥಕ್ಕಾಗಿ ಇಂದಿನ ಕ್ಷಣವ ಮರೆಯದಿರು;
ಲೋಕದ ಮನ್ನಣೆಯ ಮರೀಚಿಕೆಗೆ ಮನವೀಯದಿರು,
ದೊರೆತ ಈ ಬದುಕನು ಭಕ್ತಿಯಿಂದ ಸವಿಯುತಿರು;
ಸಾರ್ಥಕತೆ ಕೊನೆಗೆ ಸಿಗುವ ಉತ್ತರವೇನಲ್ಲ,
ಕ್ಷಣ ಕ್ಷಣವ ಸಂಭ್ರಮಿಸಿ ಬದುಕುವುದೇ ಅಲ್ಲವೇ?
~ಮಾಹೆ
Discover more from Hebbar's blog
Subscribe to get the latest posts sent to your email.
