ಸತ್ಯದ ಹಾದಿಗೆ ಕಲ್ಲುಮುಳ್ಳಿನ ಭಯವೇಕೆ?
ಸುಳ್ಳಿನ ಹಾದಿಯಲಿ ನೆಮ್ಮದಿಯ ಹುಡುಕಾಟವೇಕೆ?
ಸುಳ್ಳಿಗೆ ನೂರು ನೆನಪು, ಸತ್ಯಕೆ ಒಂದೇ ಮಾತು,
ಧರ್ಮದ ನಡೆಗೆ ಬೇಕಿಲ್ಲ ಭಯದ ಕಾವಲು;
ಸತ್ಯದಲಿ ಸರಳತೆ, ಧರ್ಮದಲಿ ಧೈರ್ಯ,
ಹಗುರ ಮನದ ಬದುಕೇ ನಿಜವಾದ ಐಶ್ವರ್ಯ.
~ಮಾಹೆ
Discover more from Hebbar's blog
Subscribe to get the latest posts sent to your email.
