ವಿವೇಕ September 12, 2026 ಹಣತೆ ಸಿದ್ಧ, ಎಣ್ಣೆಯಿದೆ, ಬತ್ತಿಯೂ ಕಾದಿದೆ,ಬೆಳಕಿಗಾಗಿ ಕತ್ತಲು ಇನ್ನೆಲ್ಲಿಗೆ ಓಡಿದೆ?ಮನವ ತೊಳೆದು, ವಿವೇಕದ ಬತ್ತಿಯ ನೆಟ್ಟರೆ,ಮೌನದ ಕಿಡಿಯಲಿ ‘ನಾನು’ ಕರಗಿದರೆ,ಹುಡುಕಿದ ಮೋಕ್ಷವು ಎದುರಲ್ಲಿ ಸಿಗುವುದಿಲ್ಲ,ಹುಡುಕುವವನೇ ಬೆಳಕೆಂದು ತಿಳಿದಾಗ, ದಾರಿಯೇ ಇಲ್ಲ. ~ ಮಾಹೆ
ಆಕಾಶ September 11, 2026 ಮನ ಹಗುರವಿರಲಿ, ಮಾತಿಗೆ ತೂಕವಿರಲಿ,ಆಸೆ ಕರಗಿದಂತೆ ಒಳಗಾಕಾಶ ತೆರೆಯಲಿ;ಭೂಸೆಳೆತ ಮೀರಿದ ಉಪಗ್ರಹದ ಹಾಗೆ,ಮೋಹದ ಗುರುತ್ವವ ದಾಟಲಿ ಮನ ಮೆಲ್ಲಗೆ;ಅಭ್ಯಾಸದ ರೆಕ್ಕೆಯಲಿ, ವೈರಾಗ್ಯದ ಬಲದಲಿ,ಆತ್ಮದ ಆಕಾಶವೇ ಕೊನೆಗೆ ನೆಲೆಯಾಗಲಿ. ~ಮಾಹೆ
ವಾಸನೆ September 10, 2026 ತಪ್ಪೆಂದು ತಿಳಿದರೂ ಹೆಜ್ಜೆಯೇಕೆ ಅತ್ತ?ಸರಿಯೆಂದು ಅರಿತರೂ ನಡೆಯಲೇಕೆ ಕಷ್ಟ?ನಡೆದ ದಾರಿಯೇ ಮತ್ತೆ ಹೆಜ್ಜೆಯ ಕರೆಯಿತು,ಪಡೆದ ಸುಖವೇ ಮತ್ತೊಮ್ಮೆ ಮನವ ಸೆಳೆಯಿತು;ಅಭ್ಯಾಸದ ಹೆಜ್ಜೆ ಸಂಸ್ಕಾರವಾಗಿ ಉಳಿದಾಗ,ಅದೇ ವಾಸನೆ, ಮನದೊಳಗಿನ ಕಾಣದ ಜಾಡು. ~ಮಾಹೆ