Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

lifepath

ಪುಟ್ಟ ಹಕ್ಕಿ

April 12, 2026

ಪುಟ್ಟ ಹಕ್ಕಿಗದೆಂತು ಗೊತ್ತು
ಟೊಂಗೆಯದು ಮರದ ಕಿವಿಗಳೆಂದು
ಅವಳ ಕಂಠಸಿರಿಗೆ ಸೋತ ಮಾತೆಯವಳು
ಎಲೆಗಳಾಡಿಸಿಹಳು ಮೆಚ್ಚುಗೆ ಸೂಸುತ ನಿಂದು

ಪುಟ್ಟ ಹಕ್ಕಿಗದೆಂತು ಗೊತ್ತು
ಅಲ್ಲೆ ಕುಳಿತಿಹ ಗಿಡುಗನ ಗೂಡದೆಂದು
ಅವಳ ಕಂಠಸಿರಿಗೆ ಕಾದು ಕುಳಿತ ಮಾತೆಯವಳು
ಹಾಡದು ಅವಳ ಕಂದಮ್ಮಗಳ ಲಾಲಿಯದೆಂದು

ಪುಟ್ಟ ಹಕ್ಕಿಗದೆಂತು ಗೊತ್ತು
ತುಂಟ ಬೆಕ್ಕಿನ ಮನೆಯ ಹಿತ್ತಲದೆಂದು
ಅವಳ ಕಂಠಸಿರಿಗೆ ಹೊಂಚುಹಾಕಿಹ ಮಾತೆಯವಳು
ಆಟಕೊ ಊಟಕೋ ಹಿಡಿಯ ಹಂಬಲಿಸಿಹಳೆಂದು

ಪುಟ್ಟ ಹಕ್ಕಿಗದೆಂತು ಗೊತ್ತು
ಮನೆಯೊಡತಿಯ ಕೋಣೆಯ ಕಿಟಕಿಯದೆಂದು
ಕಂಠಸಿರಿಗೆ ಸ್ವರವ ಸೇರಿಸಿ ನಲಿಯ ಬಯಸಿಹಳೆಂದು
ನಿನದಷ್ಟೆ ಅಲ್ಲವೋ ನೀನಿರುವ ಜಗವಿದೆಂದೂ

1
Posted in: Jatakaa Tagged: life, lifepath, love, poetry

When Silence Finds You First

April 7, 2026

The evening I reached home, the weight of the day had settled deep within me. Travel, work, and the quiet anxiety of unfinished tasks had drained something more than just energy. I was not just tired, I was spent.

1
Posted in: Memoir Tagged: life, lifepath, love, silence, story

ಓ ಮಕ್ಕಳೇ!

April 2, 2026

ಹೀಗೊಂದು ಕರೆ ನಿಮಗೆ ತಲುಪೀತೇ!
ದಣಿವಾಗಿದೆ ಎಂದು ಮೂಲೆ ಸೇರಲದು ಆದೀತೇ!
ಉದಯರವಿಯ ಕಿರಣವ ಮುಚ್ಚಿ ಮಲಗಲಾದೀತೆ!
ಕರೆಗಂಟೆಯ ಧಿಕ್ಕರಿಸಿ ಕುಳಿತರೆ ಕದ ತೆರೆದೀತೆ!

ಕೇಳಿದರೇನ ಮಾಡುವಿರೆಂದು ತಿಳಿಯಲಾದೀತೇ!
ಮೂಲೆ ಸೇರಿದ ಪೆಟ್ಟಿಗೆಯದುವೆ ಹೊಳೆದೀತೇ!
ಮುಚ್ಚಿದ ಹೊದಿಕೆಯದು ಕಸದ ಗಾಡಿಗೆ ಸೋತೀತೇ!
ತೆರೆದ ಕದದಿ ಹೊತ್ತ ಬುತ್ತಿಯ ಚೀಲ ಮರೆಸೀತೇ!

ಕರಗಿದ ಗಂಟಿನ ಚೀಲವದು ಕೊರೆದೀತೇ!
ಪೆಟ್ಟಿಗೆಯ ಧೂಳಿನ ಪರಿಮಳವದು ತಡೆದೀತೇ!
ದಿನದ ಹರಿವಿನ ಚಕ್ರವದು ನಿಂತೀತೇ!
ನಗೆ ನಿನ್ನ ಗುರುತೆಂಬುದ ಮರೆಯಲಾದೀತೇ!

1
Posted in: Jatakaa Tagged: kannada, life, lifepath, love, poetry
« Previous 1 2 3 … 30 Next »

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com