Jatakaa
Daily scribble in Kannada
ಕನ್ನಡಿ
ಕನ್ನಡಿಯ ಎದೆಯಲಿ
ಯಾವ ರೂಪ ಮಲಗಿತೋ
ನೋಡುವ ಕಣ್ಣಿನಲಿ
ಯಾವ ನೆರಳು ನಿಂತಿತೋ
ಧೂಳೊಂದು ಕವಿದಾಗ
ಮುಖವೇ ಮರೆಯಾಯಿತು
ಒರೆಸಿದ ಕ್ಷಣದಲಿ
ಬೆಳಕೇ ಎದುರಾಯಿತು
ಕನ್ನಡಿ ಹೊಸದಾಗಿ
ಏನನ್ನೂ ಪಡೆಯಲಿಲ್ಲ
ಇದ್ದ ಪ್ರತಿಬಿಂಬವ
ಮತ್ತೆ ತೋರಿಸಿತಲ್ಲ
ಕೇಳಿದೆ ಕನ್ನಡಿಯನು
ನಾನಾರು ಹೇಳೆಂದು
ಮೌನದಿ ನಗುತ್ತದು
ನನ್ನನ್ನೇ ತೋರಿಸಿತು
ಒರೆಸಿದ್ದು ಕನ್ನಡಿಯ
ಧೂಳೆಂದು ತಿಳಿದಿದ್ದೆ
ಕರಗಿದ್ದು ಎಲ್ಲಿಯೋ
ನನ್ನದೇ ಮಬ್ಬಾಗಿತ್ತು
~ ಮಾಹೆ
