Day 03 – ಷಟ್ಪದಿ November 3, 2026 Six Lines, Infinite Possibilities ಕನ್ನಡ ಕಾವ್ಯದ ಒಂದು ಸುಂದರ ರೂಪ ಕನ್ನಡ ಕಾವ್ಯ ಪರಂಪರೆಯಲ್ಲಿ ಷಟ್ಪದಿಗೆ ವಿಶಿಷ್ಟ ಸ್ಥಾನವಿದೆ. ಆರು ಸಾಲುಗಳ ಈ ಕಾವ್ಯರೂಪದಲ್ಲಿ ಕಥೆಯನ್ನೂ ಹೇಳಬಹುದು, ಭಾವನೆಯನ್ನೂ ಅರಳಿಸಬಹುದು, ತತ್ವವನ್ನೂ ತಿಳಿಸಬಹುದು.
ರಸದಾಟ November 3, 2026 ಹಸಿವನು ಗೆಲ್ಲಲು ಉಪವಾಸ ಮಾಡಿದ,ನಿದ್ದೆಯ ಮೀರಲು ಜಾಗರಣೆ ಹಿಡಿದ;ಹತ್ತಿಕ್ಕಿದಷ್ಟೂ ಮೋಹವು ಬೆಳೆಯಿತು,ಮನದೊಳಗೇ ಮತ್ತೊಂದು ಕದನವು ನಡೆಯಿತು;ರಸವನು ಅರಿತಾಗ ಸೆಳೆತವು ಕರಗಿತು,ಗೆಲ್ಲದೆಯೇ ಗೆದ್ದಾಗ ವೈರಾಗ್ಯ ಅರಳಿತು! ~ಮಾಹೆ
ಅರಿವಿನ ದಾರಿ November 2, 2026 ಗ್ರಂಥಗಳ ಓದಿನಿಂದ ಜ್ಞಾನದ ಬೆಳಕು,ಸ್ವಾನುಭವದಿಂದಲೇ ಸತ್ಯದ ಹೊಳಪು;ಔಷಧದ ಭಂಡಾರವೇ ಆರೋಗ್ಯವಲ್ಲ,ಗುರುವಿಲ್ಲದ ಸಾಧನೆಯೇ ಸಿದ್ಧಿಯಲ್ಲ;ಗುರು ತೋರಿದ ದಾರಿಯಲಿ ತನ್ನನು ಅರಿತಾಗ,ಓದಿದ ಸತ್ಯವೇ ಬದುಕಿನ ಅನುಭವವಾಗುವುದಂತೆ. ~ಮಾಹೆ