Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

kannada

Kannada Posts

ಮೌನ

September 8, 2026

ಹಗಲ ಗದ್ದಲದಲಿ ಮರೆತ ಗಡಿಯಾರ,
ಇರುಳ ಮೌನದಲಿ ಕಾಲದ ಗೆಜ್ಜೆ;
ಓಡಿ ಓಡಿ ದಣಿದ ಮನದ ಕೂಸಿಗೆ,
ನಿಲ್ಲುವುದೇ ಏಕೋ ದೊಡ್ಡ ಶಿಕ್ಷೆ.

ಹಿಡಿಯದಿರು, ಓಡಿಸಲೂ ಬೇಡ,
ಮೌನವೇ ತೊಟ್ಟಿಲು, ಅರಿವೇ ಜೋಗುಳ.

~ಮಾಹೆ

Posted in: @kannada, Jatakaa Tagged: Jataka, kannada, lifepath, poetry

ಸಾಕ್ಷಿ

September 7, 2026

ಮನದೊಳಗಿನ ದುಮ್ಮಾನ,
ಹದಗೆಡೆಪ ನಂಜಿನುರಿ;
ಖಾಲಿ ಗಡಿಗೆಯ ಸದ್ದಿಗೆ
ಹೆದರಿ ನಡುಗುವ ಎದೆಯ ಪರಿ.

ಮುಚ್ಚಳವ ತೆರೆಯದೆ,
ಕಣ್ತೆರೆದು ನೋಡದೆ,
ಕಿವಿಯಲ್ಲೇ ಕಂಡರೆ –
ಅರಿಯಲೆಲ್ಲಿ ಹುಸಿ ಬೆದರಿಕೆ?

ಸತ್ಯಕೇಕೆ ಸಾಕ್ಷಿಯ ಹೊರೆ?
ಬೆಳಕಿಗೇಕೆ ದೀಪದ ಆಸರೆ?
ಸುಳ್ಳಿಗಷ್ಟೇ ವಕೀಲರ ಕರೆ –
ಮೌನವೇ ಸತ್ಯದ ಸಹಿ ಕೊನೆಗೆ.

~ ಮಾಹೆ

Posted in: @kannada, Jatakaa Tagged: Jataka, kannada, lifepath, love, poetry

ಬಾಲ್ಯ

September 6, 2026

ಮುರಿದ ಹಲ್ಲಿನ ಬುಡದಲಿ ಉಳಿದ
ಹಾಲ್ಗಲ್ಲ ನವಿರನು ಸವೆಸಿದ
ಬಾಲ್ಯದ ತುಂಟತನ ಮರೆಯಾದುದೆಲ್ಲಿ?

ಅಂಧಶ್ರದ್ಧೆಯ ಬಲೆಯಲಿ ಸಿಲುಕಿದ
ಮಧುರ ಕಂಠದ ಹನಿಗವನವೆಲ್ಲಿ?
ನಾ ಕಂಡ ಹರುಷದ ಅಲೆಗಳ ನಡುವೆ
ಕಾಣದ ಪ್ರೀತಿಯ ಹುಡುಕಿಹೆಯೆಲ್ಲಿ?

ಕಳೆದರೂ ವರುಷ, ಮರೆತರೂ ಹರುಷ,
ಬಾಲ್ಯದ ಹುರುಪದು ತೊರೆಯುವುದೆಲ್ಲಿ?

ಕಾಯದೆ ಮುಂದಿನ ಜನ್ಮದ ಬದುಕನು,
ಇಂದೇ ಈ ಕ್ಷಣವ ಬದುಕಿಬಿಡು ಇಲ್ಲಿ;
ಮುರಿದ ಹಲ್ಲಿನ ಸಂದಿಯಲಿ ನಗುವ
ಆ ಮಗುವನು ಮತ್ತೆ ಕಂಡುಕೋ ಇಲ್ಲಿ.

~ ಮಾಹೆ

Posted in: @kannada, Jatakaa Tagged: Jataka, kannada, lifepath, love, poetry
« Previous 1 … 3 4 5 … 72 Next »

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com