lifepath
Sri Rama
ಅದಾವ ಮೋಡಿಯೊ ನಿನದು ದೊರೆ
ಮಗನಾಗಬೇಕು ನಿನ್ನಂತೆಂದು ಅಪ್ಪನ ಬಯಕೆ
ಆದರ್ಶವ ನಾ ತಳೆಯಬೇಕೆಂದು ಅಮ್ಮನ ಚಿಂತೆ
ಹೆಂಗಳೆಯ ಮನಕೆ ನೀನೊಂದು ಗೊಂದಲದ ಕತೆ
ಅದಾವ ಮೋಡಿಯೊ ನಿನದು ದೊರೆ
ಅಪ್ಪನ ಮಾತಿಗೆ ಸಿಕ್ಕಿಬಿದ್ದವ ನೀನೆಂಬ ಸೆರೆ
ಅವರಿವರ ತೃಪ್ತಿಗೆ ನಂಬಿದವರ ನೋವಿಗಾದೆ ಹೊರೆ
ರಕ್ಕಸನ ಸದೆಬಡಿದು ಲೋಕ ಕಾಯ್ದದ್ದು ಸರಿಯೆ
ಅದಾವ ಮೋಡಿಯೊ ನಿನದು ದೊರೆ
ಅವತಾರಿ ನೀನೆಂದು ಹುಲು ಮಾನವನಾದೆ ಸರಿ
ಮನುಜರೆಲ್ಲರೂ ನಿನ್ನಂತಾಗಲಾರದೇನ ಪರಿ
ನಿನ್ನ ನೆನೆದು ಲೋಕವಾಳುವ ಪರಿಯದು ಸರಿ
ಅದಾವ ಮೋಡಿಯೊ ನಿನದು ದೊರೆ
ಸ್ವಂತ ಗುರಿಗೆ ಸಿಕ್ಕೆಲ್ಲವ ಬಳಕೆ ಸರಿಯೆ
ಪ್ರಾಣಿ ಪಕ್ಷಿಗಳವು ನಮ್ಮ ಸೇವೆಗೆಂಬ ಭಾವ ಸರಿಯೆ
ನೋವಿನ ಕಥೆಯಲಿ ನಲಿವು ಕಾಣುವ ಸವಿಯೆ
ನಾನೇನು ಕಲಿಯಲೊ ಮನಮೋಹಕ ಗುರುವೆ
The Seats We Don’t Question
It is curious how rarely we question the seats we return to.
Like the way a chair remembers us. The slight dip in the cushion that fits only one body. The way we return to it at the end of a long day without thinking, as though the chair had been waiting, holding the exact shape of our tiredness. There is a quiet relief in sitting down, in not having to adjust, in not having to become anything different from what we already are.

