Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

love

ಸಕಾರಾತ್ಮಕತೆ

October 21, 2026

ಹೂವಿನ ಜೊತೆಗೆ ಮುಳ್ಳೂ ಇರಲಿ,
ನಗುವಿನ ಜೊತೆಗೆ ಕಣ್ಣೀರೂ ಬರಲಿ;
ಸುಖದಲಿ ನಗು, ದುಃಖದಲಿ ಧೈರ್ಯ,
ಏರಿಳಿತಗಳ ನಡುವೆಯೂ ಉಳಿಯಲಿ ಸ್ಥೈರ್ಯ;
ಎಲ್ಲವೂ ಒಳಿತಾಗುವುದೆಂಬ ಭ್ರಮೆ ಬೇಡ,
ಏನೇ ಬಂದರೂ ಒಳಿತಾಗಿ ಬದುಕುವುದ ಬಿಡಬೇಡ.

~ಮಾಹೆ

Posted in: @kannada, Jatakaa Tagged: Jataka, kannada, lifepath, love, poetry

ಶಾಂತಿ

September 13, 2026

ಹಣವಿರದೆ ಕೊಳ್ಳಲಾರೆವು ಲೋಕದ ವಸ್ತು,
ಶಾಂತಿಯಿರದೆ ಸವಿಯಲಾರೆವು ಬದುಕಿನ ಸೊಗಸು;
ನಡೆನುಡಿಯೇ ಜಪವಾಗಲಿ, ಬದುಕೇ ಧ್ಯಾನವಾಗಲಿ,
ಮನದಂಗಳವ ಗುಡಿಸಿ ಕೃಪೆಗೆ ಜಾಗವಾಗಲಿ;
ನಮ್ಮ ಕೈಲಾದುದ ಮಾಡಿ, ಕೈಮುಗಿದ ಕ್ಷಣದಲಿ,
ಶರಣಾದ ಮನದೊಳಗೆ ಶಾಂತಿ ತಾನೇ ನೆಲೆಸಲಿ.

~ಮಾಹೆ

Posted in: @kannada, Jatakaa Tagged: Jataka, kannada, lifepath, love, poetry

ಕರ್ತವ್ಯ

September 11, 2026

ಈ ಪದಕದಾವ ಮೋಡಿಯೋ,
ತ್ಯಾಗದ ಕೋಡಿಗೆ ಕಟ್ಟಿದ ಸೇತುವೆಯೋ;

ಬಯಕೆಯ ಬಲೆಯನು ತುಂಡರಿಸಿ,
ವಿವೇಕದ ಹರಿತವನು ಧಿಕ್ಕರಿಸಿ,
ಕಣ್ತೆರೆದು ನಡೆದರೂ
ಅಂಧಪ್ರಜ್ಞೆಯ ನೆರಳಲಿ;

ಪ್ರೀತಿ ಪ್ರೇಮವ ಬುಟ್ಟಿಯಲಿರಿಸಿ,
ದಾನವ ಪ್ರಕೃತಿಯನು
ಅದೇಕೆ ಮರೆಸುವುದೋ
ಈ ಕರ್ತವ್ಯ?

~ ಮಾಹೆ

Posted in: @kannada, Jatakaa Tagged: kannada, lifepath, love, poetry
« Previous 1 2 3 … 68 Next »

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com