ಪರಮಶಾಂತಿ October 22, 2026 ಇಷ್ಟದಲಿ ಸಿಗುವ ನೆಮ್ಮದಿ ಕ್ಷಣಿಕ,ಕಷ್ಟದಲಿ ಉಳಿಯುವ ಶಾಂತಿಯೇ ನಿಜ;ಹೊರಗಿನ ಸುಖಕೆ ಮನವನು ಕಟ್ಟದಿರು,ಕರ್ತವ್ಯ ಮಾಡುತ ಫಲದಲಿ ಸಿಲುಕದಿರು;ಮನದ ಅಲೆಗಳ ಮೀರಿದ ಮೌನದಲಿ,ಪರಮಶಾಂತಿ ಅರಳಲಿ ಆತ್ಮದ ನೆಲೆಯಲಿ. ~ಮಾಹೆ
ಸಕಾರಾತ್ಮಕತೆ October 21, 2026 ಹೂವಿನ ಜೊತೆಗೆ ಮುಳ್ಳೂ ಇರಲಿ,ನಗುವಿನ ಜೊತೆಗೆ ಕಣ್ಣೀರೂ ಬರಲಿ;ಸುಖದಲಿ ನಗು, ದುಃಖದಲಿ ಧೈರ್ಯ,ಏರಿಳಿತಗಳ ನಡುವೆಯೂ ಉಳಿಯಲಿ ಸ್ಥೈರ್ಯ;ಎಲ್ಲವೂ ಒಳಿತಾಗುವುದೆಂಬ ಭ್ರಮೆ ಬೇಡ,ಏನೇ ಬಂದರೂ ಒಳಿತಾಗಿ ಬದುಕುವುದ ಬಿಡಬೇಡ. ~ಮಾಹೆ
ಶಾಂತಿ September 13, 2026 ಹಣವಿರದೆ ಕೊಳ್ಳಲಾರೆವು ಲೋಕದ ವಸ್ತು,ಶಾಂತಿಯಿರದೆ ಸವಿಯಲಾರೆವು ಬದುಕಿನ ಸೊಗಸು;ನಡೆನುಡಿಯೇ ಜಪವಾಗಲಿ, ಬದುಕೇ ಧ್ಯಾನವಾಗಲಿ,ಮನದಂಗಳವ ಗುಡಿಸಿ ಕೃಪೆಗೆ ಜಾಗವಾಗಲಿ;ನಮ್ಮ ಕೈಲಾದುದ ಮಾಡಿ, ಕೈಮುಗಿದ ಕ್ಷಣದಲಿ,ಶರಣಾದ ಮನದೊಳಗೆ ಶಾಂತಿ ತಾನೇ ನೆಲೆಸಲಿ. ~ಮಾಹೆ