ಕರ್ತವ್ಯ September 11, 2026 ಈ ಪದಕದಾವ ಮೋಡಿಯೋ,ತ್ಯಾಗದ ಕೋಡಿಗೆ ಕಟ್ಟಿದ ಸೇತುವೆಯೋ; ಬಯಕೆಯ ಬಲೆಯನು ತುಂಡರಿಸಿ,ವಿವೇಕದ ಹರಿತವನು ಧಿಕ್ಕರಿಸಿ,ಕಣ್ತೆರೆದು ನಡೆದರೂಅಂಧಪ್ರಜ್ಞೆಯ ನೆರಳಲಿ; ಪ್ರೀತಿ ಪ್ರೇಮವ ಬುಟ್ಟಿಯಲಿರಿಸಿ,ದಾನವ ಪ್ರಕೃತಿಯನುಅದೇಕೆ ಮರೆಸುವುದೋಈ ಕರ್ತವ್ಯ? ~ ಮಾಹೆ
ಚಿಂತನೆ September 9, 2026 ಸತ್ಯವ ಹುಡುಕುವ ತನಕ ಶಾಸ್ತ್ರದ ದಾರಿ,ಸತ್ಯವ ಕಂಡ ಮೇಲೆ ಮೌನದ ಸವಾರಿ;ಮಿಥ್ಯೆಯ ನೆರಳನು ಬದಿಗಿರಿಸಿ,ಆತ್ಮದ ಬೆಳಕಲಿ ಮನವಿರಿಸಿ;ಚಿಂತನೆಯೇ ಕರಗಿದ ನಿಶ್ಚಿಂತ ನೆಲೆ,ಅದೇ ಆತ್ಮಾನುಸಂಧಾನದ ಸತ್ಯದ ಸೆಲೆ. ~ಮಾಹೆ
ಸಾಕ್ಷಿ September 7, 2026 ಮನದೊಳಗಿನ ದುಮ್ಮಾನ,ಹದಗೆಡೆಪ ನಂಜಿನುರಿ;ಖಾಲಿ ಗಡಿಗೆಯ ಸದ್ದಿಗೆಹೆದರಿ ನಡುಗುವ ಎದೆಯ ಪರಿ. ಮುಚ್ಚಳವ ತೆರೆಯದೆ,ಕಣ್ತೆರೆದು ನೋಡದೆ,ಕಿವಿಯಲ್ಲೇ ಕಂಡರೆ –ಅರಿಯಲೆಲ್ಲಿ ಹುಸಿ ಬೆದರಿಕೆ? ಸತ್ಯಕೇಕೆ ಸಾಕ್ಷಿಯ ಹೊರೆ?ಬೆಳಕಿಗೇಕೆ ದೀಪದ ಆಸರೆ?ಸುಳ್ಳಿಗಷ್ಟೇ ವಕೀಲರ ಕರೆ –ಮೌನವೇ ಸತ್ಯದ ಸಹಿ ಕೊನೆಗೆ. ~ ಮಾಹೆ