Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

poetry

Jataka Bandi

ಕೊಳಲು

August 31, 2026

ಬಿದಿರಿನ ಮೈಯಲಿ
ಯಾವ ರಾಗ ಮಲಗಿತೋ
ಖಾಲಿಯ ಎದೆಯಲಿ
ಯಾವ ಗಾನ ಕಾದಿತೋ

ಗಾಳಿಯು ಬಂದಾಗ
ಉಸಿರಾಗಿ ಬೆರೆತಿತು
ಬೆರಳಿನ ಸ್ಪರ್ಶದಲಿ
ಸ್ವರವಾಗಿ ಹರಿಯಿತು

ತನ್ನದೇ ಹಾಡೆಂದು
ಕೊಳಲು ಹೇಳಲಿಲ್ಲ
ತನ್ನೊಳ ಹರಿದುದನು
ತಡೆದು ನಿಲ್ಲಿಸಲಿಲ್ಲ

ಕೇಳಿದೆ ಕೊಳಲನು
ಸಂಗೀತವೆಲ್ಲಿಂದೆಂದು
ಮೌನದಿ ನಗುತ್ತಿತ್ತು
ಖಾಲಿಯನ್ನೇ ತೋರಿತು

ಆ ಕ್ಷಣ ನನ್ನೊಳ
ಏನೋ ಕರಗಿಹೋಯಿತು
ಉಳಿದ ಮೌನದಲಿ
ಯಾರೋ ಹಾಡುತ್ತಿದ್ದರು

~ ಮಾಹೆ

Posted in: @kannada, Jatakaa Tagged: Jataka, kannada, lifepath, love, poetry

ನೆರಳು

August 29, 2026

ಬೀಜವೊಂದು
ಕಾಡ ನೋಡುತ್ತ
ಮರವಾಗಲು
ಕಲಿಯುವುದೆ?

ನಕ್ಷತ್ರವೊಂದು
ಚಂದ್ರನ ನೋಡಿ
ಬೆಳಗಲು
ಕಾಯುವುದೆ?

ಮನವೊಂದು ಮಾತ್ರ
ತನ್ನೊಳಗಿನ ವನವನು
ಮರೆಯುತ್ತ
ಪರರ ನೆರಳನು
ಹಿಂಬಾಲಿಸುವುದೇಕೆ?

~ ಮಾಹೆ

    Posted in: @kannada, Jatakaa Tagged: Jataka, kannada, lifepath, love, poetry

    ಅಭ್ಯಾಸ

    August 21, 2026

    ಹನಿಹನಿಯ ಅಭ್ಯಾಸ, ಮನದಲಿ ಸಂಸ್ಕಾರ,
    ಬಿಡಬಿಡುತ ಬಂಧನವ, ಮೂಡುವ ವೈರಾಗ್ಯ;
    ಕ್ಷಣದ ಮೌನವೇ ಮಾತಿಗೆ ಕಾವಲು,
    ಕ್ಷಣದ ಅರಿವೇ ಹೆಜ್ಜೆಗೆ ದೀವಿಗೆ;
    ಆದರ್ಶ ತೋರಿದರೆ ಗುರಿಯಷ್ಟೇ ಕಾಣುವುದು,
    ಅಭ್ಯಾಸ ಹಿಡಿದರೆ ದಾರಿಯೇ ತೆರೆಯುವುದು.

    ~ಮಾಹೆ

    Posted in: @kannada, Jatakaa Tagged: Jataka, kannada, lifepath, poetry
    « Previous 1 … 20 21 22 … 90 Next »

    No matter our age, our circumstances, or abilities, each of us can create something remarkable with our lives - Joseph B. Wirthlin
    • Facebook
    • Twitter
    • LinkedIn

    Copyright © 2026 Hebbar's blog.

    Me WordPress Theme by themehall.com