Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

The Lies I Tell Myself

August 20, 2026

I have begun to notice something uncomfortable about myself.

I lie to myself almost every day.

Not the large lies that deceive the world. Mine are quieter.

I tell myself I am too busy when something frightens me.
I call it patience when I am afraid to decide.
I call it acceptance when I have simply given up.
I say something does not matter when, somewhere inside, it hurts deeply.

And perhaps the cleverest lie of all is that I know myself.

Posted in: Jatakaa Tagged: life, lifepath, love, reflection

ಪ್ರಾರ್ಥನೆ

July 28, 2026

ತಪದ ಬೆಂಕಿಯಲಿ ಬೇಯಬೇಕಿಲ್ಲ,
ಜಪದ ಎಣಿಕೆಯಲಿ ಕಳೆಯಬೇಕಿಲ್ಲ;
“ಕಷ್ಟವ ಕಳೆ” ಎಂದ ಆರ್ತತೆಯಲ್ಲೇ,
“ನನ್ನನ್ನೇ ಕಳೆ” ಎಂದು ಬೇಡುವುದಷ್ಟೇ;


ಮಾಯೆಯ ಬೇರನು ಕೀಳುವ ಪ್ರಾರ್ಥನೆಯಲಿ,
ನಾನು ಕರಗಿದರೆ, ಅವನೇ ಉಳಿಯುವನು.

~ಮಾಹೆ

Posted in: @kannada, Jatakaa Tagged: Jataka, kannada, lifepath, poetry

ಹಾದಿ

July 24, 2026

ಹಾದಿಯ ಹುಟ್ಟನು
ಯಾರೂ ಕಂಡಿರಲಿಲ್ಲ
ನಡೆಯುವ ಹೆಜ್ಜೆಯನು
ಅದು ಕೇಳಿರಲಿಲ್ಲ

ಬಂದವರ ಹೆಸರನು
ಮಣ್ಣಲಿ ಬರೆದಿರಲಿಲ್ಲ
ಹೋದವರ ನೆನಪನು
ಗಾಳಿಗೆ ಬಿಟ್ಟಿರಲಿಲ್ಲ

ಬಿಸಿಲಿನ ಬೆಂಕಿಯಲಿ
ಮೌನದಿ ಮಲಗಿತು
ಮಳೆಯ ಹನಿಯಲಿ
ಮತ್ತೆ ನಗೆಯಿತು

ತಡವಾಗಿ ಬಂದವರ
ಹೊರೆಯನು ಹೊತ್ತಿತು
ಓಡಿಹೋದವರ
ಧೂಳನು ನುಂಗಿತು

ಕೇಳಿದೆ ದಾರಿಯನು
ಎಲ್ಲಿಗೆ ಸಾಗುವೆ ಎಂದು
ನನ್ನ ಹೆಜ್ಜೆಯನು
ಮೌನದಿ ತೋರಿತು

~ ಮಾಹೆ

Posted in: @kannada, Jatakaa Tagged: Jataka, kannada, lifepath, love, poetry
« Previous 1 … 8 9 10 … 179 Next »

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com

Hebbar's blog

Scribbles in this journey of life

Skip to content ↓