ಸಂಕಲ್ಪ October 17, 2026 ಸಂಕಲ್ಪಕೆ ಬೇಕು ವಿವೇಕದ ಬೆಳಕು,ಪ್ರಾರ್ಥನೆಗೆ ಬೇಕು ಹೃದಯದ ಮಿಡಿತ;ಜಪದ ಎಣಿಕೆಯಲ್ಲ ಸಾಧನೆಯ ಹಿರಿಮೆ,ಅಹಂಕಾರ ಕರಗುವುದೇ ಅದರ ಮಹಿಮೆ;ದೃಢ ಸಂಕಲ್ಪಕೆ ಆರ್ದ್ರ ಪ್ರಾರ್ಥನೆ ಸೇರಿದಾಗ,ಸರಳ ಪೂಜೆಯೂ ಆತ್ಮೋನ್ನತಿಯ ದಾರಿಯಾಗದೆ. ~ಮಾಹೆ
ಕಾಲಜ್ಞಾನ October 16, 2026 ನಿನ್ನೆಯ ನೆನಪು ಬದುಕಿನ ಪಾಠ,ನಾಳೆಯ ಕನಸು ಪಯಣದ ನೋಟ;ಇಂದಿನ ಕ್ಷಣವ ಹಿಡಿದಿಡುವೆನೆಂಬ ಭ್ರಮೆ,ಕಾಲವ ಕಟ್ಟಿಹಾಕುವ ಮನದ ವ್ಯಾಮೋಹವೇ!ನಿನ್ನೆಯಿಂದ ಕಲಿತು, ನಾಳೆಗೆ ದಾರಿ ಕಾಣು,ಇಂದಿನ ಬದುಕಲಿ ಮೂರನ್ನೂ ಒಂದಾಗಿಸು. ~ಮಾಹೆ
ಬೇಕು ಬೇಡ October 15, 2026 ಬೆಳಕಿದ್ದೂ ಕತ್ತಲಲಿ ಹುಡುಕುವುದಾವ ಸಾಧನೆಯೋ?ಸಂಪತ್ತಿದ್ದೂ ಭಿಕ್ಷಾಪಾತ್ರೆ ಹಿಡಿಯುವುದಾವ ಸಿರಿಯೋ?ಅವನ ನೆರಳಲಿದ್ದೂ ನಡುಗುವುದಾವ ಭಯವೋ?ಅವನೊಳಗಿದ್ದೂ ಅಲೆದಾಡುವುದಾವ ಮಾಯೆಯೋ?ಬೇಕು ಬೇಡಗಳ ಬಲೆಯಲಿ ಸಿಲುಕಿದ ಮನವೇ,ಇರುವುದನು ಮರೆತು ಇಲ್ಲದ್ದನು ಬೇಡುವುದೇಕೋ? ~ಮಾಹೆ