ನೆರಳು August 29, 2026 ಬೀಜವೊಂದುಕಾಡ ನೋಡುತ್ತಮರವಾಗಲುಕಲಿಯುವುದೆ? ನಕ್ಷತ್ರವೊಂದುಚಂದ್ರನ ನೋಡಿಬೆಳಗಲುಕಾಯುವುದೆ? ಮನವೊಂದು ಮಾತ್ರತನ್ನೊಳಗಿನ ವನವನುಮರೆಯುತ್ತಪರರ ನೆರಳನುಹಿಂಬಾಲಿಸುವುದೇಕೆ? ~ ಮಾಹೆ
ಅಭ್ಯಾಸ August 21, 2026 ಹನಿಹನಿಯ ಅಭ್ಯಾಸ, ಮನದಲಿ ಸಂಸ್ಕಾರ,ಬಿಡಬಿಡುತ ಬಂಧನವ, ಮೂಡುವ ವೈರಾಗ್ಯ;ಕ್ಷಣದ ಮೌನವೇ ಮಾತಿಗೆ ಕಾವಲು,ಕ್ಷಣದ ಅರಿವೇ ಹೆಜ್ಜೆಗೆ ದೀವಿಗೆ;ಆದರ್ಶ ತೋರಿದರೆ ಗುರಿಯಷ್ಟೇ ಕಾಣುವುದು,ಅಭ್ಯಾಸ ಹಿಡಿದರೆ ದಾರಿಯೇ ತೆರೆಯುವುದು. ~ಮಾಹೆ
ಪ್ರಾರ್ಥನೆ July 28, 2026 ತಪದ ಬೆಂಕಿಯಲಿ ಬೇಯಬೇಕಿಲ್ಲ,ಜಪದ ಎಣಿಕೆಯಲಿ ಕಳೆಯಬೇಕಿಲ್ಲ;“ಕಷ್ಟವ ಕಳೆ” ಎಂದ ಆರ್ತತೆಯಲ್ಲೇ,“ನನ್ನನ್ನೇ ಕಳೆ” ಎಂದು ಬೇಡುವುದಷ್ಟೇ; ಮಾಯೆಯ ಬೇರನು ಕೀಳುವ ಪ್ರಾರ್ಥನೆಯಲಿ,ನಾನು ಕರಗಿದರೆ, ಅವನೇ ಉಳಿಯುವನು. ~ಮಾಹೆ