ವಿಚಾರದಿಂದ ಅರಿವಿಗೆ November 4, 2026 ಸುಖವೇಕೆ ದುಃಖವೇಕೆ ಬದುಕಿನಲಿ?ನಾನೆಂಬ ಬಂಧವೇಕೆ ಈ ಜಗದಲಿ?ಕಾರಣವ ಹುಡುಕುವುದು ತತ್ವದ ವಿಚಾರ,ತನ್ನೊಳಗೆ ಕಾಣುವುದು ಆತ್ಮದ ಸಾಕ್ಷಾತ್ಕಾರ;ಜಗವನು ಅರಿತರೆ ಬದುಕಿಗೆ ದಾರಿ,ತನ್ನನು ಅರಿತರೆ ಬಂಧನಕೆ ವಿದಾಯವೆ ಸರಿ! ~ಮಾಹೆ
Day 03 – ಷಟ್ಪದಿ November 3, 2026 Six Lines, Infinite Possibilities ಕನ್ನಡ ಕಾವ್ಯದ ಒಂದು ಸುಂದರ ರೂಪ ಕನ್ನಡ ಕಾವ್ಯ ಪರಂಪರೆಯಲ್ಲಿ ಷಟ್ಪದಿಗೆ ವಿಶಿಷ್ಟ ಸ್ಥಾನವಿದೆ. ಆರು ಸಾಲುಗಳ ಈ ಕಾವ್ಯರೂಪದಲ್ಲಿ ಕಥೆಯನ್ನೂ ಹೇಳಬಹುದು, ಭಾವನೆಯನ್ನೂ ಅರಳಿಸಬಹುದು, ತತ್ವವನ್ನೂ ತಿಳಿಸಬಹುದು.
ರಸದಾಟ November 3, 2026 ಹಸಿವನು ಗೆಲ್ಲಲು ಉಪವಾಸ ಮಾಡಿದ,ನಿದ್ದೆಯ ಮೀರಲು ಜಾಗರಣೆ ಹಿಡಿದ;ಹತ್ತಿಕ್ಕಿದಷ್ಟೂ ಮೋಹವು ಬೆಳೆಯಿತು,ಮನದೊಳಗೇ ಮತ್ತೊಂದು ಕದನವು ನಡೆಯಿತು;ರಸವನು ಅರಿತಾಗ ಸೆಳೆತವು ಕರಗಿತು,ಗೆಲ್ಲದೆಯೇ ಗೆದ್ದಾಗ ವೈರಾಗ್ಯ ಅರಳಿತು! ~ಮಾಹೆ